ಕಡಲ್ಕೊರೆತಕ್ಕೆ ಮನೆ, ಕಾಂಕ್ರೀಟ್ ರಸ್ತೆ ನೀರುಪಾಲು

Meenakaliya sea shore
Published on

ಮಂಗಳೂರು: ತೀವ್ರ ಕಡಲ್ಕೊರೆತದಿಂದ ಬೈಕಂಪಾಡಿ ಮೀನಕಳಿಯ ಸಮುದ್ರ ತೀರದ ಮೀನುಗಾರಿಕಾ ಕಾಂಕ್ರೀಟ್ ರಸ್ತೆಯ ಮತ್ತಷ್ಟು ಭಾಗ ಗುರುವಾರ ಕುಸಿದು ಸಮುದ್ರ ಪಾಲಾಗಿದೆ.

ಪರಿಣಾಮ ಕಡಲಿನ ತೆರೆಗಳು ರಸ್ತೆ ದಾಟಿ ಎರಡು ಮನೆಗಳು ಭಾಗಶಃ ಹಾನಿಯಾಗಿವೆ. ಎರಡು ದಿನಗಳ ಹಿಂದೆಯಷ್ಟೇ ಸಮುದ್ರ ಕೊರೆತದಿಂದ ಇಲ್ಲಿನ ಮೀನುಗಾರಿಕಾ ರಸ್ತೆಯ ಕೆಲ ಭಾಗ ಮುರಿದು ಹೋಗಿತ್ತು.

ಒಟ್ಟು ಸುಮಾರು 30 ಮೀಟರ್ ನಷ್ಟು ಕಾಂಕ್ರೀಟ್ ರಸ್ತೆ ಹಾನಿಯಾಗಿದ್ದು, ಮೀನಕಳಿಯ- ಚಿತ್ರಾಪುರ ಭಾಗದ ಜನರು ನಿತ್ಯ ಒಡಾಟಕ್ಕೆ ಸಮಸ್ಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net