

ಹುಬ್ಬಳ್ಳಿ: ಇಲ್ಲಿಯ ಮರಾಠ ಗಲ್ಲಿಯ ಮನೆಯೊಂದರ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಭೇದಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ತೊರವಿ ಹಕ್ಕಲದ ವಿನಾಯಕ ಭಜಂತ್ರಿ (30), ಆನಂದ ನಗರದ ಅಕ್ಷಯ ಪಟ್ಟಣ (24) ಬಂಧಿತರು. ಬಂಧಿತರಿಂದ 30 ಗ್ರಾಂ ಬಂಗಾರ, 190 ಗ್ರಾಂ ಬೆಳ್ಳಿ ಆಭರಣ, ಎಲ್‌ಇಡಿ ಟಿವಿ, ಬೈಕ್ ಹಾಗೂ ನಗದು ಸೇರಿ ಒಟ್ಟು 2.20 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಮಹ್ಮದ್ ರಫಿಕ್ ತಹಸೀಲ್ದಾರ್ ನೇತೃತ್ವದ ತಂಡ ವಿಚಾರಣೆ ನಡೆಸಿದ ವೇಳೆ ಮತ್ತೆರಡು ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.