ಎರಡು ತಲೆಯುಳ್ಳ ಹಾವು ರಕ್ಷಣೆ

030201
Published on

ಬೆಳಗಾವಿ: ಅಕ್ರಮವಾಗಿ ಎರಡುತಲೆಯುಳ್ಳ ಹಾವು ಸಾಗಣೆ ಮಾಡುತ್ತಿದ್ದ ಯುವಕನನ್ನು ಶುಕ್ರವಾರ ರಾತ್ರಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದು, ಹಾವು ರಕ್ಷಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ನಿವಾಸಿ ಗೋಪಿನಾಥ (ಪಿಂಟು) ಹನುಮಂತ ಕವಳೆ (22)ಬಂಧಿತ. ಗೋಪಿನಾಥ, ಸ್ವಗ್ರಾಮದಲ್ಲಿ ದೊರೆತ ಹಾವನ್ನು ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸಿಬ್ಬಂದಿ ದಾಳಿ ನಡೆಸಿ, ಬಂಧಿಸಿದ್ದಾರೆ.

ಹಾವನ್ನು ರಕ್ಷಿಸಿ ಜಮಖಂಡಿಯ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಸಿಬ್ಬಂದಿ ಆರ್.ಬಿ. ಯರನಾಳ, ಕೆ.ಡಿ. ಹಿರೇಮಠ, ಬಾಳಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net