

ಚಿಕ್ಕಬಳ್ಳಾಪುರ: ಚೇಳೂರು ತಾಲೂಕಿನ ಕುರಪಲ್ಲಿಯಲ್ಲಿನ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಾಧಮ್ಮ(17) ಹಾಗೂ ಗಡಿದಂ ಆದರ್ಶ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಾಹಿತಿ ( 14) ಮೃತರು. ಇಬ್ಬರು ಶಾಲಾ ರಜೆ ಕಾರಣ ಊರಿಗೆ ಬಂದಿದ್ದು
ತಾಯಿಯೊಂದಿಗೆ ವ್ಯವಸಾಯ ಮಾಡುವ ಸಂದರ್ಭದಲ್ಲಿ ಕೃಷಿ ಹೊಂಡಕ್ಕೆ ಪೈಪು ಅಳವಡಿಸಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ಸ್ಥಳಕ್ಕೆ ಕೃಷಿ ಅಧಿಕಾರಿ ಗಂಗಾಧರಯ್ಯ, ಸಬ್ ಇನ್ಸ್‌ಪೆಕ್ಟರ್ ಹರೀಶ್ ಭೇಟಿ ಪರಿಶೀಲಿಸಿದರು. ಚೇಳೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.