ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಳ್ವಾಸ್‌ನ ಇಬ್ಬರು ಆಯ್ಕೆ

New Project (7)
Published on

ಮೂಡುಬಿದಿರೆ: ದ.ಕ.ಜಿಪಂ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು, ಉತ್ತರ ವಲಯ ಹಾಗೂ ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲೆ, ಊರ್ವ ಮಂಗಳೂರು ಸಹಯೋಗದಲ್ಲಿ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ-ಬಾಲಕಿಯರ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆ ಕ್ರೀಡಾಪಟುಗಳು 1 ಚಿನ್ನ, 2 ಬೆಳ್ಳಿ, 5 ಕಂಚಿನ ಪದಕ ಪಡೆದಿದ್ದಾರೆ. ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಫಲಿತಾಂಶ: ಅಭಿಷೇಕ್ 400 ಮೀ. ವೈಯಕ್ತಿಕ ಈಜು(ಪ್ರಥಮ ಸ್ಥಾನ), 50 ಮೀ. ಬಟರ್ ಪ್ಲೈ(ತೃ), 100 ಮೀ. ಫ್ರೀ ಸ್ಟೈಲ್(ದ್ವಿ), ಅಭಿನವ್ ಕೃಷ್ಣ ಎಚ್.ಆರ್. 100 ಮೀ. ಬ್ಯಾಕ್ ಸ್ಟ್ರೋಕ್(ದ್ವಿ), ವರ್ಚಸ್ವಿ ಎ.ಪಿ. 50 ಮೀ. ಫ್ರೀ ಸ್ಟೆಲ್(ತೃ), 50 ಮೀ ಬ್ಯಾಕ್ ಸ್ಟ್ರೋಕ್(ತೃ), ಆಯುಷ್ ಪ್ರವೀಣ್ 100 ಮೀ. ಬ್ಯಾಕ್ ಸ್ಟ್ರೋಕ್(ತೃ), 100 ಮೀ. ಫ್ರೀ ಸ್ಟೈಲ್(ತೃತೀಯ).

ವಿಜೇತರನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net