ಸಂಬರಗಿ: ಎರಡು ಮುಖದ ಹಾವು ವಶ

22 sambaragi 1-Web
Published on

ಸಂಬರಗಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ತಿಕೊಂಡಿ ಗ್ರಾಮದಿಂದ ತಿಕೋಟಾ ಮಾರ್ಗವಾಗಿ ಸುಮಾರು 8 ಲಕ್ಷ ರೂ. ಮೌಲ್ಯದ ಎರಡು ಮುಖವಿರುವ ಹಾವನ್ನು ಸಾಗಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಜಾಲಗಿರಿ ಗ್ರಾಮದ ಸಚಿನ ಗಣಪತಿ ಭೋಸಲೆ (19) ಬಂಧಿತ ಯುವಕ.

ಸಚಿನ ಭೋಸಲೆ ಎರಡು ಮುಖದ ಹಾವನ್ನು ಜತ್ತ ತಾಲೂಕಿನ ತಿಕೊಂಡಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದ. ಖಚಿತ ಮಾಹಿತಿ ಪಡೆದ ಉಮದಿ ಠಾಣೆ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ. ಸಾಂಗಲಿ ಡಿವೈಎಸ್ಪಿ ದಿಲೀಪ ಜಗದಾಳೆ ನೇತೃತ್ವದಲ್ಲಿ ಪಿಎಸ್‌ಐ ದತ್ತಾತ್ರೇಯ ಕೊಳೇಕರ, ಬಸವರಾಜ ಕೊಷ್ಟಿ, ವಿಕ್ರಮ ಗೋಧೆ, ಇಂದ್ರಜಿತ್ ಗೋಧೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಉಮದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಕ್ಕೆ ಪಡೆದ ಎರಡುಮುಖದ ಹಾವನ್ನು ಅರಣ್ಯ ಇಲಾಖೆ ಅಧಿಕಾರಿ ಢವಳೆ ಅವರಿಗೆ ಒಪ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net