ಯಲಹಂಕ ಪವರ್ ಪ್ಲಾಂಟ್​ನಲ್ಲಿ ಬೆಂಕಿ ಅವಘಡ, ಇಬ್ಬರು ಇಂಜಿನಿಯರ್​ಗಳ ದುರ್ಮರಣ

Engeneers
ಕೃಷ್ಣಭಟ್ (56) ಇಇ ಮೆಕ್ಯಾನಿಕಲ್, ಮಂಜಪ್ಪ (58) ಎಇಇ ಎಲೆಕ್ಟ್ರಿಕಲ್
Published on

ಬೆಂಗಳೂರು: ಯಲಹಂಕ ಸಮೀಪದ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಇಂಜಿನಿಯರ್​ಗಳು ಸೋಮವಾರ ನಸುಕಿಗೆ ಮೃತಪಟ್ಟಿದ್ದಾರೆ‌ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ಕಾರ್ಯಪಾಲಕ ಇಂಜಿನಿಯರ್ ( ಮೆಕ್ಯಾನಿಕಲ್) ಕೃಷ್ಣಭಟ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ( ಎಲೆಕ್ಟ್ರಿಕಲ್) ಮಂಜಪ್ಪ ಮೃತಪಟ್ಟ ದುರ್ದೈವಿಗಳು.

ಅ.2ರ ನಸುಕಿಗೆ ಸಂಭವಿಸಿದ ಸ್ಫೋಟದಲ್ಲಿ ಬೆಂಕಿ ಜ್ವಾಲೆ ಹಠಾತ್ ವ್ಯಾಪಿಸಿ ಕೆಲಸದ ಸ್ಥಳದಲ್ಲಿದ್ದ 15 ಇಂಜಿನಿಯರ್​ಗಳು ಗಾಯಗೊಂಡಿದ್ದರು.

ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಇಂಜಿನಿಯರ್​ಗಳು ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net