ನೀರಿನಲ್ಲಿ ಮುಳುಗಿ ಯುವಕರು ಸಾವು

Published on

ಮಡಿಕೇರಿ: ಬಾಳಾಜಿ ಗ್ರಾಮದಲ್ಲಿರುವ ಕೀರೆಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಹೈಸೊಡ್ಲೂರು ಗ್ರಾಮದ ಮಂಡಂಗಡ ಬೋಪುಣಿ, ಶೀಲಾ ದಂಪತಿ ಪುತ್ರ ಬೋಪಣ್ಣ(೧೮), ಪೊನ್ನಂಪೇಟೆಯ ಗುತ್ತಿಗೆದಾರ ಅಣ್ಣಪ್ಪ ಅವರ ಪುತ್ರ ಮೋನಿಸ್(೧೮) ಮೃತಪಟ್ಟ ಯುವಕರು.
ಗೆಳೆಯರೊಂದಿಗೆ ಮಧ್ಯಾಹ್ನ ೧೨ ಗಂಟೆಗೆ ಪಕ್ಕದ ಬಾಲಾಜಿ ಕೀರೆಹೊಳೆಯಲ್ಲಿ ಈಜಲು ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಮೃತ ಬೋಪಣ್ಣನನ್ನು ರಕ್ಷಣೆ ಮಾಡಲು ಸ್ಥಳೀಯ ತೋಟದಲ್ಲಿ ಕೆಲಸ ಮಾಡುವ ಇಬ್ಬರು ಕಾರ್ಮಿಕರು ಶ್ರಮಿಸಿದ್ದರೂ ಕೂಡ ಬೊಪ್ಪಣ್ಣನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಶವವನ್ನು ಹೊರ ತೆಗೆಯಲಾಗಿದೆ.
ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ರಾಮ ರೆಡ್ಡಿ ಹಾಗು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಗೋಣಿಕೊಪ್ಪ ಶವಾಗಾರಕ್ಕೆ ಕೊಂಡೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net