

ಹುಬ್ಬಳ್ಳಿ: ಇಲ್ಲಿಯ ಬೈಲಪ್ಪನವರ ನಗರದ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಶಾಖೆ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಚರ್ಮರೋಗ ತಜ್ಞ ಡಾ. ರಾಘವೇಂದ್ರ ತೋಪಖಾನೆ ಹಾಗೂ ಮಕ್ಕಳ ತಜ್ಞ ಡಾ. ಶ್ರೀನಾಥ ಮುಗಳಿ ಅವರಿಗೆ 2025ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಐಎಂಎ ಸದಸ್ಯತ್ವ ಪಡೆದು 25 ವರ್ಷ ಪೂರ್ಣಗೊಂಡ 17 ವೈದ್ಯರು, 9 ವೈದ್ಯರಿಗೆ ಪ್ರೆಸಿಡೆಂಟ್ ಅಪ್ರಿಸಿಯೇಷನ್ ಅವಾರ್ಡ್, 7 ವೈದ್ಯರಿಗೆ ಅಪ್ರಿಸಿಯೇಷನ್ ಅವಾರ್ಡ್, 70ನೇ ವರ್ಷದ ಜನ್ಮದಿನ ಆಚರಿಸುತ್ತಿರುವ ಐವರು ವೈದ್ಯರನ್ನು ಸನ್ಮಾನಿಸಲಾಯಿತು.
ಕಿದ್ವಾಯಿ ಮಾಜಿ ನಿರ್ದೇಶಕಿ ಪದ್ಮಶ್ರೀ ಡಾ. ವಿಜಯಲಕ್ಷ್ಮೀ ದೇಶಮಾನೆ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅತಿಥಿಗಳಾಗಿ ಆಗಮಿಸಿದ್ದರು.
ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಪ್ರಭು ಬಿರಾದಾರ, ಉಪಾಧ್ಯಕ್ಷ ಡಾ. ಬಸವರಾಜ ಸಜ್ಜನ, ಕಾರ್ಯದರ್ಶಿ ಡಾ. ರಾಜಶೇಖರ ದುಂಡರೆಡ್ಡಿ, ಖಜಾಂಚಿ ಡಾ. ಮಂಜುನಾಥ ನೇಕಾರ, ವೈದ್ಯರ ದಿನಾಚರಣೆ ಕಾರ್ಯಕ್ರಮದ ಚೇರ್ಮನ್ ಡಾ. ಎಸ್.ವೈ. ಮುಲ್ಕಿಪಾಟೀಲ ಇತರರು ಇದ್ದರು.