ಅಪಘಾತದಲ್ಲಿ ಇಬ್ಬರ ದುರ್ಮರಣ

acc
ಮಂಡಗದ್ದೆ ಬಳಿ ಖಾಸಗಿ ಬಸ್-ಬೈಕ್ ಅಪಘಾತ ಸ್ಥಳ.
Published on

ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪದ 16ನೇ ಮೈಲಿಕಲ್ಲಿನ ಬಳಿ ಶನಿವಾರ ಸಂಜೆ ಖಾಸಗಿ ಬಸ್ ಮತ್ತು ಬೈಕ್ ಮುಖಾಮುಖಿಯಾಗಿ ಇಬ್ಬರು ಯುವಕರು ಸ್ಥಳದಲ್ಲಿ ಮೃತರಾಗಿದ್ದಾರೆ. ಮೃತರಾದವರನ್ನು ಶಿವಮೊಗ್ಗ ಸಮೀಪದ ಬೇಡರಹೊಸಳ್ಳಿ ಗ್ರಾಮದ ವಸಂತ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ . ಇಬ್ಬರು ಸುಮಾರು 35 ವರ್ಷದ ವಯಸ್ಸಿನವರು. ಎಲೆಕ್ಟ್ರಿಕ್ ಕೆಲಸ ಮಾಡುವ ಇವರು ಊರಿಗೆ ಹಿಂತಿರುಗುವ ವೇಳೆ ಈ ಅವಘಾತವಾಗಿದೆ. ಬಸ್ಸು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿತ್ತು. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net