ಬಸ್, ಬೈಕ್ ಮಧ್ಯೆ ಅಪಘಾತ: ಹಿರೇಬಂಡಾಡಿಯ ಸಹೋದರರು ಮೃತ್ಯು

Accident
Published on

ಬೆಳ್ತಂಗಡಿ: ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟ ಬಳಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ್ತ ಶಿಕ್ಷಕ ಮರ್ಹೂಮ್ ಅಬ್ದುರ್ರಜಾಕ್ ಅವರ ಮಕ್ಕಳಾದ ಹಮ್ಮಬ್ಬ ಸಿರಾಜ್( 30)ಮತ್ತು ಕಜುತುಬುದ್ದೀನ್ ಸಾದಿಕ್(32) ಮೃತಪಟ್ಟವರು.

ಗುರುವಾರವಷ್ಟೇ ವೇಣೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ನಾಲ್ಕು ವರ್ಷ ಪ್ರಾಯದ ಅಣ್ಣನ ಮಗನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಗೋಳಿಯಂಗಡಿಯ ಸಾರ್ವಜನಿಕರು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಸಹೋದರರಿಬ್ಬರೂ ವಿದೇಶದಲ್ಲಿ ಉದ್ಯೋಗಿಗಳಾಗಿದ್ದರು. ಕಳೆದ ಐದು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net