ಮರಕ್ಕೆ ಪಿಕಪ್ ಡಿಕ್ಕಿ, ಇಬ್ಬರು ಮೃತ್ಯು

Accident
Published on

ಬಂಟ್ವಾಳ: ಮಂಗಳೂರು-ಬಿ.ಸಿ.ರೋಡ್ ಮಧ್ಯೆ ಬ್ರಹ್ಮರಕೂಟ್ಲು ಸಮೀಪ ರಾಮಲ್‌ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕ್‌ಅಪ್ ವಾಹನ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಮತ್ತು ಆಶೀತ್(21) ಮೃತಪಟ್ಟವರು. ಬಂಟ್ವಾಳ ಮೂಲದ ಸಿಂಚನ್ ಮತ್ತು ಸುದೀಪ್ ಗಾಯಗೊಂಡಿದ್ದಾರೆ.

ಬಿ.ಸಿ.ರೋಡ್ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿನ ಕೇಟರಿಂಗ್ ಸಂಸ್ಥೆಯೊಂದರ ವಾಹನ ಇದಾಗಿದ್ದು, ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹಾರ ಪೂರೈಸಿ ಮರಳುತ್ತಿದ್ದ ಸಂದರ್ಭ ಪಿಕಪ್‌ನ ವೀಲ್ ಎಂಡ್ ತುಂಡಾದ ಪರಿಣಾಮ ಅಪಘಾತ ಸಂಭವಿಸಿದೆೆ. ವಾಹನ ರಾಮಲಕಟ್ಟೆ ತಲುಪುತ್ತಿದ್ದಂತೆ ರಸ್ತೆ ಮಧ್ಯೆಯೇ ಎರಡು ಸುತ್ತು ತಿರುಗಿದ್ದು ಬಳಿಕ ಮರಕ್ಕೆ ಡಿಕ್ಕಿ ಹೊಡೆದಿದೆೆ. ವಾಹನ ತಿರುಗಿದ ರಭಸಕ್ಕೆ ಹಿಂಬದಿಯಲ್ಲಿದ್ದ ನಾಲ್ವರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ಪೈಕಿ ಓರ್ವ ರಸ್ತೆ ಪಕ್ಕದ ಡ್ಯಾಂನ ಕಾಂಪೌಂಡ್ ಗೋಡೆ ದಾಟಿ ನೀರಿಗೆ ಬಿದ್ದಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಚಾಲಕ ಮತ್ತು ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ತುಂಬೆ ಆಸ್ಪತ್ರೆಗೆ ದಾಖಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net