ಬೆಳಗಾವಿ ಜಿಲ್ಲೆಯಲ್ಲಿ ಗುಡುಗು‌ಸಹಿತ ಭಾರಿ ಮಳೆ ; ಸಿಡಿಲಿಗೆ ಇಬ್ಬರು ಬಲಿ

IMG-20230530-WA0069.webp
Published on

ಬೆಳಗಾವಿ : ಜಿಲ್ಲೆಯಲ್ಲಿ ಹಲವೆಡೆ ಮಂಗಳವಾರ ಭಾರಿ ಗಾಳಿ, ಗುಡುಗು-ಸಿಡಿಲು ಸಹಿತ  ಮಳೆಯಾಗಿದ್ದು, ಅಥಣಿ ತಾಲೂಕಿನಲ್ಲಿ ಕುರಿಗಾಹಿ ಯುವಕ ಮತ್ತು ಕೃಷಿ ಕೂಲಿಕಾರ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ.

ಅಥಣಿ ತಾಲೂಕಿನ ಕಕಮರಿಯ ಅಮುಲ್ ಜೈಸಿಂಗ್(24) ಹಾಗೂ ದೇಸರಹಟ್ಟಿಯ ವಿಟ್ಟಾಬಾಯಿ ಕಮಕರ (50) ಮೃತಪಟ್ಟಿದ್ದಾರೆ. ಕಕಮರಿ  ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದಾಗ ಅಮುಲ್ ಜೈಸಿಂಗ್ ಹಾಗೂ ವಿಟ್ಟಾಬಾರಿ ಅವರು ಹೊಲದಲ್ಲಿ ಅರಿಷಿಣ ಹಸನು ಮಾಡುತ್ತಿದ್ದಾಗ ಸಿಡಿಲು ಬಡಿಸಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನು ಅವರ ಜತೆಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.

ರಾಯಬಾಗ ಪಟ್ಟಣದ ಚಿಂಚಲಿ ರಸ್ತೆಯಲ್ಲಿ ವಿದ್ಯುತ್ ಕಂಬ ಧರೆಗುರುಳಿರುವುದು.
ರಾಯಬಾಗ ಪಟ್ಟಣದ ಚಿಂಚಲಿ ರಸ್ತೆಯಲ್ಲಿ ವಿದ್ಯುತ್ ಕಂಬ ಧರೆಗುರುಳಿರುವುದು.

ಇನ್ನು ರಾಯಬಾಗ ತಾಲೂಕಿನಾದ್ಯಂತ ಮಳೆ-ಗಾಳಿಯಿಂದಾಗಿ ರಾಯಬಾಗ ಪಟ್ಟಣದ ಚಿಂಚಲಿ ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ಮರಗಳು ನೆಲಕ್ಕಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ, ಹತ್ತಾರು ಮನೆಗಳ ತಡಗಿನ ಮೇಲ್ಚಾವಣಿ ಹಾರಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನ ಭಾರಿ ಮಳೆಯಾಗಿದೆ. ಅಲ್ಲಲ್ಲಿ ಗಿಡಮರಗಳು ಧರೆಗುರಳಿದ್ದು, ವಿಧ್ಯುತ್ ಕಂಬಗಳು ನೆಲಕ್ಕಪ್ಪಳಿಸಿದ್ದರಿಂದ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದೆ. ಮಂಗಳವಾರ ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದು ಮಧ್ಯಾಹ್ನ ಅಥಣಿ, ರಾಯಭಾಗ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದ್ದು,  ಬೈಲಹೊಂಗಲ, ಕಿತ್ತೂರು, ಸವದತ್ತಿ ಹಾಗೂ ಖಾನಾಪುರಭಾಗದಲ್ಲಿಯೂ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net