ವಾಹನ ಅಪಘಾತದಲ್ಲಿ ಇಬ್ಬರು ಸಾವು, ಓರ್ವ ಗಂಭೀರ

25Sambaragi1 CRIME
Published on

ಸಂಬರಗಿ: ಟ್ರಕ್​ ಹಿಂದಿಕ್ಕಲು ಹೋದ ಗೂಡ್ಸ್​ ವಾಹನವೊಂದು ಅದೇ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್​ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಟನೆ ಮಹಾರಾಷ್ಟ್ರದ ಮುಚ್ಚಂಡಿ ಗ್ರಾಮದ ಜತ್ತ&ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಮಹಮ್ಮದ್​ ಹುಮಸಗಿ (24) ಹಾಗೂ ಇಂಡಿ ತಾಲೂಕಿನ ಪಡನೂರು ಗ್ರಾಮದ ದೀಪಕ ಅರ್ಜುನ ವಡಾರ (23) ಮೃತರು. ಟ್ರಕ್​ ಚಾಲಕ ವಿಜಯಪುರದ ಬಸವರಾಜ ಮುಂಜೇನವರ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜತ್ತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಜತ್ತ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಜಯಪುರದಿ-ಂದ ಒಣದ್ರಾಕ್ಷಿ ತುಂಬಿಕೊಂಡು ತಾಸ್ಗಾಂವಗೆ ಟ್ರಕ್​ ತೆರಳುತ್ತಿತ್ತು. ಹಿಂದೆ ಬಂದ ಗೂಡ್ಸ್  ವಾಹನವು ಟ್ರಕ್​ ಹಿಂದಿಕ್ಕಲು ಹೋದಾಗ ನಡೆ-ದಿ-ದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net