ಬನ್ನಿ ಉತ್ಸವ, ಇಬ್ಬರು ಮೃತ

Published on

ಬಳ್ಳಾರಿ : ಜಿಲ್ಲೆಯ ಆಂಧ್ರದ ದೇವರಗುಡ್ಡದ ಮಾಳ ಮಲ್ಲೇಶ್ವರ ಕಲ್ಯಾಣೋತ್ಸವ (ಬನ್ನಿ ಉತ್ಸವ)ದಲ್ಲಿ ಇಬ್ಬರು ಮೃತಪಟ್ಟಿದ್ದು, ನೂರಕ್ಕೂ ಅಧಿಕ ಜನರಿಗೆ ಗಾಯಾಳು ಆಗಿರುವ ಘಟನೆ ನಡೆದಿದೆ.

ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಮಂಡಲದ ದೇವರಗುಡ್ಡದಲ್ಲಿನ ಐತಿಹಾಸಿಕ ಮಳಮಲ್ಲೇಶ್ವರಸ್ವಾಮಿ ದೇವಸ್ಥಾನವಿದೆ. ಪ್ರತಿ ವರ್ಷ ದಸರಾದಲ್ಲಿ ಮಧ್ಯರಾತ್ರಿ ವೇಳೆ ನೆರಣಿಕೆ ಗ್ರಾಮಸ್ಥರು ಮಲ್ಲೇಶ್ವರ ಸ್ವಾಮಿ ಮತ್ತು ಮಾಳಮ್ಮ ದೇವಿಯ ಕಲ್ಯಾಣೋತ್ಸವ ನಂತರ ದೇವರ ಮೂರ್ತಿಗಳನ್ನು ಚೈತ್ರಯಾತ್ರೆ ನಡೆಸುತ್ತಾರೆ. ಆ ವೇಳೆ ದೇವರ ವಿಗ್ರಹಗಳನ್ನು ಸುತ್ತಲಿನ ಗ್ರಾಮಸ್ಥರು ತೆಗೆದುಕೊಂಡು ಹೋಗಲು ಪೈಪೋಟಿ ನಡೆಸುತ್ತಿವೆ. ಈ ಬನ್ನಿ ಉತ್ಸವದಲ್ಲಿ ಇಬ್ಬರು ಮೃತಪಟ್ಟಿದ್ದು, ನೂರಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಈ ಪೈಕಿ ಐವರು ಗಂಭೀರವಾಗಿದ್ದು ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದೋನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಸರಾ ಪ್ರಯುಕ್ತ ಎಂದಿನಂತೇ ದೇವರಗುಡ್ಡದ ಮಳಮಲ್ಲೇಶ್ವರಸ್ವಾಮಿ ದೇವಸ್ಥಾನದ ಕಾರ್ಣಿಕೋತ್ಸವದಲ್ಲಿ ಹಾವು ಹರಿದಾಡಿತು ಎಚ್ಚರ, ಗಂಗೆ ಹೊಳೆ ದಂಡಿಗೆ ನಿಂತಾಳ ಉತ್ತರ ಭಾಗಕ್ಕೆ ಹೊರಟಾಳ, 7700 ನಗೆಹಳ್ಳಿ (ಹತ್ತಿ), 3400 ಹೊಕ್ಕಳ ಜೋಳ, ಮೂರು ಆರಾದೀತು, ಆರು ಮೂರಾದೀತು ಬಹು ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net