

ಹುಬ್ಬಳ್ಳಿ: ನಗರದ ಸರಾಫಗಟ್ಟಿಯ ಚಿನ್ನಾಭರಣ ವ್ಯಾಪಾರಸ್ಥರಾದ ಕರಿ ಆಂಡ್ ಸನ್ಸ್ ಮಳಿಗೆಯು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಸೆ. 9ಮತ್ತು 10ರಂದು ಗೋಕುಲ ರಸ್ತೆಯ ಹೋಟೆಲ್ ಡೆನಿಸನ್ಸ್ನಲ್ಲಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನೂರು ವರ್ಷಗಳನ್ನು ಪೂರೈಸಿರುವ ಅತ್ಯಂತ ಹಳೆಯ ಮತ್ತು ನಂಬಿಕೆಗೆ ಪಾತ್ರವಾದ ಆಭರಣ ವ್ಯಾಪಾರಸ್ಥರಾದ ಕರಿ ಆಂಡ್ ಸನ್ಸ್ ನವರು ಇದೇ ಮೊದಲ ಬಾರಿಗೆ ಆಭರಣಗಳ ಪ್ರದರ್ಶನ ಏರ್ಪಡಿಸಿದ್ದು ಎರಡು ದಿನ ಬೆಳಗ್ಗೆ 10.30ರಿಂದ ರಾತ್ರಿ 8ಗಂಟೆಯವರೆಗೆ ತೆರೆದಿರಲಿದೆ ಎಂದು ಮಾಲೀಕ ಶ್ರೀಕಾಂತ ಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.