ಎರಡು ದಿನ ವೈನ್‌ಶಾಪ್ ಓಪನ್ ಮಾಡಿಸಿ..

liquor
Published on

ಬೆಳಗಾವಿ: ‘ಬಹಳ ತೊಂದರೆಯಾಗಿದೆ 2-3 ದಿವಸ ಬಾರ್ ಓಪನ್ ಮಾಡಿಸಿ…!’ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರಾಯಿ ಸಿಗದಿದ್ದರಿಂದ ಮದ್ಯ ಪ್ರಿಯರು ಸಚಿವ ಜಗದೀಶ ಶೆಟ್ಟರ್ ಅವರಿಗೆ ಈ ರೀತಿ ಮನವಿ ಮಾಡಿದ್ದಾರಂತೆ.

ಕರೊನಾ ನಿಯಂತ್ರಿಸುವ ಕುರಿತಂತೆ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ವತಃ ಸಚಿವ ಜಗದೀಶ ಶೆಟ್ಟರ್ ಇದನ್ನು ತಿಳಿಸಿ ಹಾಸ್ಯ ಚಟಾಕಿ ಹಾರಿಸಿದರು. ಮದ್ಯದ ಅಂಗಡಿ ತೆರೆಯಿರಿ ಎಂದು ನನಗೆ ಎರಡು ಕರೆಗಳು ಬಂದಿದ್ದವು. ಇಪ್ಪತ್ತೊಂದು ದಿನ ಕುಡಿಯದಿದ್ದರೆ ಏನೂ ಆಗುವುದಿಲ್ಲ. ಜನರು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net