ಎರಡು ದಿನಗಳ ಫಾರ್ಮ ಎಕ್ಸಿಬಿಷನ್ ಉದ್ಘಾಟನೆ

New Exibiton new
Published on

ಹುಬ್ಬಳ್ಳಿ : ನಗರದ ಕೆಎಲ್​ಇ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಫಾರ್ಮ ಎಕ್ಸಿಬಿಷನ್-2025 ಅನ್ನು ಕೆಎಲ್​ಇ ತಾಂತ್ರೀಕ ಮಹಾವಿಧ್ಯಾಲಯದ ಕುಲಸಚಿವ ಡಾ. ಬಸವರಾಜ ಅನಾಮಿ ಮತ್ತು ಪಿ.ಸಿ. ಜಾಬೀನ್ ಪಿಯು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಆರ್. ವಾಘಮೋಡೆ ಉದ್ಘಾಟಿಸಿದರು.

ಡಾ. ಬಸವರಾಜ ಅನಾಮಿ ಮಾತನಾಡಿ, ಔಷಧೀಯ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಆವಿಷ್ಕಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ಔಷಧ ಬಗೆಗಿನ ಕಾಳಜಿ ಹಾಗೂ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಪ್ರಾತ್ಯಕ್ಷಿಕ ಪ್ರದರ್ಶನಗಳು ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಚ್.ಎಂ. ವಿಶ್ವನಾಥಸ್ವಾಮಿ ಮಾತನಾಡಿ, ಫಾರ್ಮ ಎಕ್ಸಿಬಿಷನ್​ನಲ್ಲಿ ನಗರದ 700ಕ್ಕೂ ಹೆಚ್ಚು ವಿವಿಧ ಪಿಯು ಮಹಾವಿದ್ಯಾಲಯದ ವಿಧ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರದರ್ಶನದ ಸಂಯೋಜಕರಾದ ಡಾ. ಎಸ್.ಎಸ್. ಹೊನ್ನಾಳಿ, ಡಾ. ಪಿ.ಎಂ. ರೋಣದ ಹಾಗೂ ಡಾ. ವಿಜಯಕುಮಾರ ಮೇಟಿ ಅವರು ಪ್ರದರ್ಶನದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಪ್ರದರ್ಶನದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ವಿಧ್ಯಾರ್ಥಿಗಳು ಔಷಧ ವಿಜ್ಞಾನದ ವಿವಿದ ಪ್ರಾತ್ಯಕ್ಷಗಳನ್ನು ಪ್ರದರ್ಶಿಸಿಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net