

ರಾಯಚೂರು ಹೈದ್ರಾಬಾದ ಕರ್ನಾಟಕ ಜನಾಂದೋಲನ ಕೇಂದ್ರದಿಂದ ಮೇ 24 ಮತ್ತು 25 ರಂದು ನಗರದ ಕೃಷಿ ವಿಶ್ವವಿದ್ಯಾಲಯಸಭಾಂಗಣದಲ್ಲಿ ವರ್ತಮಾನ ಸಂದರ್ಭದ ರಾಜಕಾರಣ,ತತ್ವ ಸಿದ್ದಾಂತಗಳ ಕುರಿತು ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆಂದು ಕೇಂದ್ರದ ಅಧ್ಯಕ್ಷ ಬಿ.ಬಸವರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನ ಐದು ವಿಚಾರ ಗೋಷ್ಟಿಗಳು ನಡೆಯಲಿದ್ದು, ಮೇ 24 ರಂದು ಬೆಳಿಗ್ಗೆ 9.30ಕ್ಕೆ ಮೊದಲ ಗೋಷ್ಟಿ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಬಯಸಿದ್ದ ಸಂವಿಧಾನ ಕುರಿತು ಹಿರಿಯ ಚಿಂತಕ ಶಿವಸುಂದರ ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾನಿಧಿ ಕಾಲೇಜಿನ ಪ್ರಾಚಾರ್ಯ ಡಾ.ಚಂದ್ರಗೀರೀಶ ವಹಿಸಲಿದ್ದಾರೆ. ಸಹ ಸ್ಪಂದನಾ ಸಂವಾದದಲ್ಲಿ ಅನೇಕರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.15 ಕ್ಕೆ ಸಂವಿಧಾನ ಸಶಕ್ತೀಕರಣ ಸವಾಲುಗಳು ಮತ್ತು ಸಾಧ್ಯತೆಗಳ ವಿಷಯವಾಗಿ ಸಿಪಿಐ(ಎಂ) ರಾಜ್ಯ ಕಾಯದರ್ಶಿ ಡಾ.ಕೆ.ಪ್ರಕಾಶ ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾರ್ಮಿಕ ಸಂಘಟನಾ ಜಂಟಿ ಕ್ರಿಯಾ ಸಮಿತಿ ಕಾರ್ಯದರ್ಶಿ ಜೆ.ವಿ.ಭಟ್ ವಹಿಸಲಿದ್ದಾರೆ. ನಂತರ ವರ್ತಮಾನ ಸಂದರ್ಭದಲ್ಲಿ ಗಾಂಧಿವಾದದ ಸ್ಥಾನ ಮಾನ ಸ್ಥಿತಿಗತಿ ಕುರಿತು ಕೆಆರ್‌ಎಸ್ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ವಿಷಯ ಮಂಡಿಸಲಿದ್ದಾರೆ. ಬೆಳಗಾವಿಯ ದೀಲಿಜ್ ಕಾಮತ್ ಅಧ್ಯಕ್ಷತೆಯ ವಹಿಸಲಿದ್ದಾರೆ.
ಮೇ.25 ರಂದು ಭಾರತದ ಪರಿಕಲ್ಪನೆ, ವ್ಯವಸ್ಥೆ ಮತ್ತು ಜನ ಬದುಕಿನ ವೈವ್ಯರು ವಿಷಯವಾಗಿ ಸಾಮಾಜಿಕ ಕಾರ್ಯ ಕರ್ತರ ದೀಲಿಜ್ ಕಾಮತ್ ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಸರ್ವೋದಯ ಪಕ್ಷದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ವಹಿಸಿಕೊಳ್ಳಲಿದ್ದಾರೆ. ಹೈದ್ರಾಬಾದ ಕರ್ನಾಟಕ ಶೈಕ್ಷಣಿಕ ಸ್ಥಿತಿಗತಿ ಮತ್ತು ಕಥೆವ್ಯಥೆ ವಿಷಯವಾಗಿ ಭಾರತಜ್ಞಾನ ವಿಜ್ಞಾನ ಸಮಿತಿಯ ಚೇಗರೆಡ್ಡಿ , ಸೈಯದ್ ಹಫಿಜುಲ್ಲಾ ವಿಷಯ ಮಂಡಿಸಲಿದ್ದು, ಸಾಹಿತಿ ವೀರಹನುಮಾನ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲಾ ಗೋಷ್ಟಿಗಳಲ್ಲಿ ಸಹ ಸಂವಾದಕರು ಭಾಗವಹಿಸಲಿದ್ದಾರೆಂದರು.
ಈ ಸಂದರ್ಭದಲ್ಲಿ ಜಾನವೆಸ್ಲಿ, ಡಾ.ಶಾರದಾ ಹುಲಿನಾಯಕ, ಖಾಜಾ ಅಸ್ಲಂ ಅಹ್ಮದ್, ಈರಣ್ಣ ಭಂಡಾರಿ, ಲಿಂಗಪ್ಪ ಪೂಜಾರಿ, ಎಕ್ಬಾಲ್ ಖಾನ್, ಲಕ್ಷ್ಮಣರಾವ್, ಬೂದೆಪ್ಪ, ಸಂಜಯ ಕುಷ್ಟಗಿ ಇದ್ದರು.