

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಮಾ.10 ಮತ್ತು 11ರಂದು ನಗರದಲ್ಲಿ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಲಾಗಿದೆ.
ಪುರುಷರಿಗೆ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, 10,000 ಮೀ ಓಟದ ಸ್ಪರ್ಧೆ, 110 ಮೀ, 400 ಮೀ ಹರ್ಡಲ್, 100 ಮೀ, 400 ಮೀ ರಿಲ್ಲೆ , ಲಾಂಗ್‌ಜಂಪ್, ಹೈ ಜಂಪ್, ಶಾಟ್‌ಫುಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, ಹ್ಯಾಮರ್ ಥ್ರೋ, ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಟೇಬಲ್ ಟೆನ್ನಿನ್ ಸಿಂಗಲ್ಸ್ ಮತ್ತು ಡಬಲ್ಸ್, ಭಾರ ಎತ್ತುವ ಸ್ಪರ್ಧೆ, ದೇಹದಾರ್ಡ್ಯ, ಚೆಸ್, ಯೋಗ ಹಾಗೂ ಈಜು ಸ್ಪರ್ಧೆ ಆಯೋಜಿಸಲಾಗಿದೆ.
ಮಹಿಳೆಯರಿಗೆ 100 ಮೀ, 200 ಮೀ, 400 ಮೀ, 800 ಮೀ ಓಟದ ಸ್ಪರ್ಧೆ, 110 ಮೀ ಹರ್ಡಲ್, 400 ಮೀ ರಿಲ್ಲೆ, ಲಾಂಗ್ ಜಂಪ್, ಹೈ ಜಂಪ್, ಶಾಟ್‌ಫುಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಟೇಬಲ್ ಟೆನ್ನಿನ್ ಸಿಂಗಲ್ಸ್ ಮತ್ತು ಡಬಲ್ಸ್, ಟೆನಿಕಾಯ್ಟ್ ಸಿಂಗಲ್ಸ್ ಮತ್ತು ಡಬಲ್ಸ್, ಚೆಸ್, ಯೋಗ, ಈಜು ಸ್ಪರ್ಧೆ ಏರ್ಪಡಿಸಲಾಗಿದೆ. ಇದರೊಟ್ಟಿಗೆ ಫುಟ್ಬಾಲ್, ಹಾಕಿ, ಕ್ರಿಕೆಟ್, ಬ್ಯಾಸೆಟ್ ಬಾಲ್, ವಾಲಿಬಾಲ್, ಕಬ್ಬಡಿ, ಬಾಲ್ಬ್ಯಾಡ್ಮಿಂಟನ್, ಕೇರಂ, ಖೋ ಖೋ ಪುರುಷರ ಹಾಗೂ ಕಬ್ಬಡಿ, ಬಾಲ್ ಬ್ಯಾಡ್ಮಿಂಟನ್, ಕೇರಂ, ಥ್ರೋಬಾಲ್, ಖೋ ಖೋ ಮಹಿಳೆಯರ ಗುಂಪು ಸ್ಪರ್ಧೆಗಳಿವೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದುಸ್ತಾನಿ ಸಂಗೀತ, ಲಘು ಶಾಸ್ತ್ರಿಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರಿಯ ಸಂಗೀತ, ಜಾನಪದ ಗೀತೆ, ಕಥಕ್, ಮಣಿಪುರ, ಕೂಚುಪುಡಿ, ಕಥಕಳ್ಳಿ, ಒಡಿಸಿ, ಭರತನಾಟ್ಯ ಮತ್ತು ಜಾನಪದ ನೃತ್ಯ ಸಂಗೀತ ಹಾಗೂ ನೃತ್ಯ ಸ್ಪರ್ಧೆ, ಸ್ಟಿಂಗ್ ವಾದ್ಯಗಳು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಲಘು ಶಾಸ್ತ್ರಿಯ ಸಂಗೀತ, ವಿಂಡ್ ವಾದ್ಯ, ಕರ್ನಾಟಕ ಶಾಸ್ತ್ರೀಯ, ಕರ್ನಾಟಕ ಲಘು ಶಾಸ್ತ್ರೀಯ, ಪರಕೇಷನ್ ವಾದ್ಯ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕ ವಾದ್ಯ ಸಂಗೀತ ಸ್ಪರ್ಧೆಗಳಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.