

ರಾಯಚೂರು ದಲಿತ ಸಾಹಿತ್ಯ ಪರಿಷತ್ ವತಿಯಿಂದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳವನ್ನು ಜೂ.28 ಮತ್ತು 29 ರಂದು ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆಂದು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೋಳಸಂಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ.ಜಯದೇವಿ ಗಾಯಕವಾಡ ಅವರನ್ನು ಆಯ್ಕೆ ಮಾಡಲಾಗಿದೆ. ದಮನಿತ ಹಾಗೂ ಶೋಷಿತರಿಗೆ ತುಡಿಯುವ, ದಲಿತ ಸಂವೇದನೆಯ ಲೇಖಕರಿಗೆ ಅವಕಾಶ ಕಲ್ಪಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಎರಡು ದಿನ ಸಮ್ಮೇಳನ ನಡೆಯಲಿದ್ದು, ಪ್ರಬುದ್ಧ ಭಾರತ, ಸಂವಿಧಾನ ರಕ್ಷಣೆ, ಮೀಸಲಾತಿ ವಿಷಯದ ಕುರಿತು ಸಂವಾದ ಹಾಗೂ ಚಿಂತನೆಗಳು ನಡೆಯಲಿದೆ. ಸಮತಾಗೀತೆ, ಸಂವಿಧಾನ ಪ್ರಸ್ತಾವನೆ ಓದು, ಬುದ್ಧ ಚಿಂತನೆಗಳ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಕಾರ್ಯಕ್ರಮದಲ್ಲಿ 25 ಪುಸ್ತಕಗಳ ಬಿಡುಗಡೆ ನಡೆಯಲಿದೆ ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸುಭಾಸ್, ಡಾ. ಎಚ್.ಎಸ್.ಬಿ.ಕೋಲ್ಕಾರ, ಭಜಂತ್ರಿ ಧರ್ಮವತಿ, ತಾಯಪ್ಪ ಮಚೇಟ್ಹಾಳ್ ಇದ್ದರು