

ರಾಯಚೂರು ನಗರದ ಜಿಲ್ಲಾಡಳಿತ ಭವನದ ಸಮೀಪದ ಕೃಷಿ ಹೊಂಡದಲ್ಲಿ ಎರಡು ಮೊಸಳೆಗಳು ಭಾನುವಾರ ಪ್ರತ್ಯೇಕ್ಷವಾಗಿದ್ದರಿಂದ ಜನರು ಭಯ ಬೀತರಾಗಿದ್ದಾರೆ.
ಕೃಷಿ ಹೊಂಡಕ್ಕೆ ಯಕ್ಲಾಸಪೂರ ಗ್ರಾಮದ ಮಾರ್ಗವಾಗಿ ಜಿಲ್ಲಾಡಳಿತ ಮುಂದೆ ಹಾದುಹೋಗಿರುವ ಕಾಲುವೆಯಿಂದ ನೀರು ಬೃಹತ್ ಹೊಂಡಕ್ಕೆ ಸೇರುತ್ತಿವೆ ಜಾನುವಾರುಗಳು, ಕುರಿಗಳು, ನೀರು ಕುಡಿಯಲು ತೆರಳುತ್ತಿವೆ, ಈ ಮೊಸಳೆಗಳಿಂದ ಜಾನುವಾರುಗಳ ಮೇಲೆ ದಾಳಿ ಮಾಡಿವೆಂದು ದಾಳಿ ಮಾಡಿವೆಂದು ರೈತರು ಆರೋಪಿಸಿದ್ದಾರೆ.
ಇದರಿಂದಾಗಿ ಜನರು ಭಯ ಬೀತರಾಗಿದ್ದಾರೆ, ಬೃಹತ್ ಹೊಂಡದ ಪಕ್ಕದಲ್ಲಿ ಎನ್‌ಆರ್‌ಬಿಸಿ ವಿಸ್ತೀರ್ಣ ಕಾಲುವೆ ಹಾದು ಹೋಗಿದ್ದು ನೀರು ಬಿಟ್ಟ ಸಂದರ್ಭದಲ್ಲಿ ಕಾಲುವೆಯಿಂದ ಎರಡು ಮೊಸಳೆಗಳು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಹೊಂಡದ ಸುತ್ತಮುತ್ತಲಿನಲ್ಲಿ ಜಮೀನುಗಳಿದ್ದು ರೈತರು, ಕೂಲಿ ಕಾರ್ಮಿಕರು ಕೆಲಸ ಮಾಡಲು ಹಿಂಜರಿಯುವಂತಾಗಿದೆ. ರೈತರು ಮತ್ತು ಯಕ್ಷಾಸಪೂರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಬಲೆ ಹಾಕಿ ಕಾರ್ಯಾಚರಣೆ ನಡೆಸಿದ್ದಾರೆ, ಆದರೂ ಮೊಸಳೆಗಳು ಬಲೆಗೆ ಬಿಳದೇ ಇರುವುದರಿಂದ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಹೊಂಡ ಆಳವಿಲ್ಲದೆ ಇರುವುದರಿಂದ ಮೊಸಳೆಗಳು ಸುತ್ತಮುತ್ತಲಿನ ಜಾಲಿಗಿಡಗಳು, ಗಿಡಗಂಟೆಗಳು ಬೆಳದಿದ್ದರಿಂದ ಮರೆಯಾಗಿರ ಬಹುದು, ಜಾಮೀನುಗಳಲ್ಲಿ ಬೆಳೆ ಇರುವುದರಿಂದ ಜಮೀನುಗಳಿಗೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ.\