ಎರಡು ಆಕಳನ್ನು ರಕ್ಷಿಸಿದ ಪೊಲೀಸರು

Published on

ಕಂಪ್ಲಿ: ಬಕ್ರೀದ್ ಹಿನ್ನೆಲೆ ಬಲಿಕೊಡಲು ಕಟ್ಟಿ ಹಾಕಿದ್ದ ಎರಡು ಆಕಳುಗಳನ್ನು ಪೊಲೀಸರು ರಕ್ಷಿಸಿದ ಘಟನೆ ತಾಲೂಕಿನ ರಾಮಸಾಗರ ಗ್ರಾಮದ ಗುಲಗಂಜೆ ರಸ್ತೆಯ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ನಡೆದಿದೆ.

ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಾಗ, ಗುಡ್ಡಗಾಡು ಪ್ರದೇಶದಲ್ಲಿ ಗಿಡಕ್ಕೆ ಎರಡು ಆಕಳನ್ನು ಕಟ್ಟಿಹಾಕಿದ್ದು ಯಾವುದೇ ಮೇವು ನೀರಿನ ವ್ಯವಸ್ಥೆ ಇರಲಿಲ್ಲ. ಸುರಕ್ಷತೆಗೆ ಎರಡು ಆಕಳುಗಳನ್ನು ಗೋಶಾಲೆಗೆ ಸೇರಿಸಲಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆಯಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net