ಫುಡ್ ಪಾಯ್ಸನ್‌ನಿಂದ ಇಬ್ಬರು ಮಕ್ಕಳ ಸಾವು

food pasion
Published on

ರಾಯಚೂರು: ಫುಡ್ ಪಾಯ್ಸನ್‌ನಿಂದ ಇಬ್ಬರು ಮಕ್ಕಳು ಮೃತಪಟ್ಟು, ಮತ್ತೊಬ್ಬ ಮಗು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ವಡ್ಲೂರು ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಜರುಗಿದೆ.
ಗ್ರಾಮದ ಬ್ರಿಕ್ಸ್ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿರುವ ಲಿಂಗಸುಗೂರು ತಾಲೂಕು ಕಮಲದಿನ್ನಿ ಗ್ರಾಮದ ಮಾರುತಿ ಮತ್ತು ಹುಸೇನಮ್ಮ ಪುತ್ರಿಯರಾದ ಆರತಿ (9), ಪ್ರಿಯಾಂಕಾ (7) ಮೃತ ಬಾಲಕಿಯರಾಗಿದ್ದಾರೆ. ಜತೆಗೆ ಲಕ್ಕಪ್ಪ ತೀವ್ರವಾಗಿ ಅಸ್ವಸ್ಥಗೊಂಡು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾತ್ರಿ ಊಟ ಮಾಡಿದ ನಂತರ ಮಕ್ಕಳಲ್ಲಿ ವಾಂತಿ ಬೇ ಕಾಣಿಸಿಕೊಂಡಿದ್ದು, ಬಿಸಿಲು ಮತ್ತು ಕುಡಿಯುವ ನೀರಿನಿಂದ ಆಗಿರಬಹುದು ಎಂದು ಪಾಲಕರು ನಿರ್ಲಕ್ಷ ವಹಿಸಿದ್ದಾರೆ. ನಂತರ ಆಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net