ಗುಂಡಿ ನೀರಿನಲ್ಲಿ ಬಿದ್ದು ಬಾಲಕರಿಬ್ಬರ ದುರ್ಮರಣ

IMG_20230723_120947
Published on

ಕಲಬುರಗಿ: ‌ನಗರದ ದುಬೈ ಕಾಲೋನಿಯ ಕಲಬುರಗಿ ‌ಕಲ್ಯಾಣ ಮಂಟಪದ ಬಳಿ

ನಿರ್ಮಿಸುತ್ತಿದ್ದ ಓವರ್‌ ಹೆಡ್ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ನಡೆದಿದೆ.

ನೀರಿನ ಟ್ಯಾಂಕ್ ಸುತ್ತಮುತ್ತ 15 ಅಡಿ ಗುಂಡಿ ತೋಡಲಾಗಿತ್ತು. ಮಳೆ ನೀರಿನಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು.

ಈ ವೇಳೆ ತಗ್ಗುಗುಂಡಿಗೆ ಬಿದ್ದು ಅಭಿಷೇಕ (11), ಅಜಯ್ (12) ಮೃತಪಟ್ಟಿದ್ದಾರೆ.

ನಿನ್ನೆ ಮಧ್ಯಾನದಿಂದ ನಾಪತ್ತೆಯಾಗಿದ್ದ ಬಾಲಕರು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಚೌಕ್ ಪೊಲೀಸರ ಭೇಟಿ ನೀಡಿದ್ದಾರೆ.

ಶಾಸಕಿ ಕನೀಜ್ ಫಾತಿಮಾ, ಬಿಜೆಪಿ ಮುಖಂಡ ಚಂದು ಸ್ಥಳಕ್ಕೆ ಭೇಟಿ ನೀಡಿದರು‌. ಮೃತ ದೇಹ ಪರಿಶೀಲಿಸಿ, ಸೂಕ್ತ ಪರಿಹಾರದ ಭರವಸೆ ನೀಡಿದ ನಂತರ ಮೃತದೇಹ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net