ಕೃಷಿ ಹೊಂಡ ಪಾಲಾದ ಇಬ್ಬರು ಮಕ್ಕಳು

IMG-20221203-WA0005
Published on

ವಿಜಯಪುರ : ನೀರಿನ ಹೊಂಡಕ್ಕೆ ಬಿದ್ದು ಎರಡು ಕಂದಮ್ಮಗಳು ಸಾವನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದಲ್ಲಿ ಶನಿವಾರ ನಡೆದಿದೆ.

ಕೃಷಿ ಹೊಂಡದ ಹತ್ತಿರ ದನ ಮೇಯಿಸಲು ಹೋಗಿದ್ದ ವೇಳೆ ಘಟನೆ ಜರುಗಿದ್ದು, ರಮೇಶ (7) ಹಾಗೂ ಮಾಳಿಂಗರಾಯ (11) ಇಬ್ಬರು ಮೃತಪಟ್ಟಿದ್ದಾರೆ. ಹೊಂಡದಲ್ಲಿ ನೀರು ಕುಡಿಯಲೆಂದು ಹೋದಾಗ ಕಾಲು ಜಾರಿ ಬಿದ್ದು ದುರ್ಘಟನೆ ನಡೆದಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net