ಚಿರತೆ ದಾಳಿಗೆ ಎರಡು ಕರು ಬಲಿ

ಚಿರತೆ ದಾಳಿಗೆ ಎರಡು ಕರು ಬಲಿ
Published on

ಹನೂರು: ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಎರಡು ದಿನಗಳ ಅಂತರದಲ್ಲಿ 2 ಕರುಗಳನ್ನು ತಿಂದು ಹಾಕಿದೆ.

ಗ್ರಾಮದ ಸಿದ್ದಾಚಾರಿ ಎಂಬುವರು ಜಮೀನಿನ ಕೊಟ್ಟಿಗೆಯಲ್ಲಿ 5 ಕರುಗಳನ್ನು ಕಟ್ಟಿ ಹಾಕಿದ್ದರು. ಮಂಗಳವಾರ ರಾತ್ರಿ ಚಿರತೆ ದಾಳಿ ನಡೆಸಿ ಕರುವೊಂದನ್ನು ಎಳೆದೊಯ್ದು ತಿಂದು ಹಾಕಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಬುಧವಾರ ಕೂಡ ಮತ್ತೊಂದು ಕರುವನ್ನು ತಿಂದಿದೆ. ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net