ವಿಜಯಪುರ&ಚಿಕ್ಕಲಕಿ ಕ್ರಾಸ್​ ಎರಡು ಬಸ್​ ಆರಂಭ

Two buses started between Vijayapura & Chikkalakki Cross.webp
Published on

ವಿಜಯಪುರ : ನಗರದಿಂದ ಚಿಕ್ಕಲಕಿ ಕ್ರಾಸ್​ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್​ ಸಂಚಾರಕ್ಕೆ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಿಂಗರಿಸಲಾಗಿದ್ದ ಎರಡು ಬಸ್ಸುಗಳ ಸಂಚಾರಕ್ಕೆ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯ ಮಲ್ಲು ದಳವಾಯಿ ಮತ್ತು ಬ್ಲಾಕ್​ ಕಾಂಗ್ರೆಸ್​ ಈರಗೊಂಡ ಬಿರಾದಾರ ಚಾಲನೆ ನೀಡಿದರು.

ಮಲ್ಲು ದಳವಾಯಿ ಮಾತನಾಡಿ, ಸಚಿವ ಎಂ.ಬಿ. ಪಾಟೀಲರ ಸೂಚನೆಯಂತೆ ಈ ಗ್ರಾಮೀಣ ಸಾರಿಗೆ ನೂತನ ಬಸ್ಸುಗಳ ಸೇವೆ ಪ್ರಾರಂಭವಾಗಿದೆ. ಅದರಿಂದ ಈ ಮಾರ್ಗದಲ್ಲಿ ಬರುವ ಚಿಕ್ಕಲಕಿ ಕ್ರಾಸ್​, ಅರ್ಜುಣಗಿ, ಯಕ್ಕುಂಡಿ, ಬಬಲೇಶ್ವರ, ಸಾರವಾಡ, ವಿಜಯಪುರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಸಚಿವರಿಗೆ ಹಾಗೂ ಸಾರಿಗೆ ಇಲಾಖೆಗೆ ಕೃತತೆ ಸಲ್ಲಿಸುವುದಾಗಿ ತಿಳಿಸಿದರು.

ಈರನಗೌಡ ಬಿರಾದಾರ ಮಾತನಾಡಿದರು. ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಲಾಲಸಾಬ ಜಮಾದಾರ, ಗ್ರಾ.ಪಂ. ಅಧ್ಯ ರಫೀಕ ಸೋನಾರ, ಸದಸ್ಯರಾದ ಗುರು ಜೈನಾಪೂರ, ಸಿದರಾಯ ಬಿರಾದಾರ, ಬಸು ಕಾಲಿಬಾಗ, ಗೌಡಪ್ಪ ಬಿರಾದಾರ, ಮುಖಂಡರಾದ ಬಾಬುಗೌಡ ಪಾಟೀಲ, ಚನ್ನಪ್ಪ ಕೊಪ್ಪದ, ಶೇಖಪ್ಪ ಕೊಪ್ಪದ, ಪ್ರಭುಗೌಡ ಪಾಟೀಲ, ಅಶ್ಪಾಕ ಜಾಗೀರದಾರ, ಜುಬ್ರಾಯಿಲ್​ ಮೊಕಾಲೆ, ರವಿ ಕಾಂಬಳೆ, ನಾಗರಾಜ ಕುಲಕರ್ಣಿ, ಮುದಕನಗೌಡ ಪಾಟೀಲ, ಗುರುಬಸಪ್ಪ ತೆವರಟ್ಟಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕ ನಾರಾಯಣಪ್ಪ ಕುರುಬರ, ಡಿಟಿಒ ಎಂ.ಎಸ್​. ಹಿರೇಮಠ, ಡಿಪೋ 1ರ ಮ್ಯಾನೇಜರ್​ ಎಸ್​.ಎ. ಬಿರಾದಾರ, ಎಟಿಎಂ ಜೆ. ಕೆ. ಹುಗ್ಗೆನವರ ಮತ್ತಿತರರಿದ್ದರು.

ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ವಿಜಯಪುರ& ಚಿಕ್ಕಲಕಿ ಕ್ರಾಸ್​ ಮಧ್ಯೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್​ ಸೇವೆಗೆ ಮಲ್ಲು ದಳವಾಯಿ ಮತ್ತು ಈರಗೊಂಡ ಬಿರಾದಾರ ಜಂಟಿಯಾಗಿ ಚಾಲನೆ ನೀಡಿದರು. ರಫೀಕ ಸೋನಾರ, ಗುರು ಜೈನಾಪೂರ, ಸಿದರಾಯ ಬಿರಾದಾರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net