

ಸಿದ್ದಾಪುರ: ವಧೆ ಮಾಡುವ ಉದ್ದೇಶದಿಂದ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದಾಗ ಎರಡು ಹೋರಿಗಳನ್ನು ತಾಲೂಕಿನ ಮಾವಿನಗುಂಡಿ ಚೆಕ್ ಪೋಸ್ಟ್ ಬಳಿ ಸಿದ್ದಾಪುರ ಪೊಲೀಸರು ರಕ್ಷಿಸಿ, ಮೂವರನ್ನು ಬಂಧಿಸಿದ್ದಾರೆ.
ಶಿರಾಳಕೊಪ್ಪದಿಂದ ಭಟ್ಕಳಕ್ಕೆ ವಾಹನದಲ್ಲಿ ತೆರಳುತ್ತಿದ್ದ ಶಿರಾಳಕೊಪ್ಪ ತಾಲೂಕಿನ ತಾಳಗುಂದ ಗ್ರಾಮದ ರಾಮಪ್ಪ ವಡಕನ್ನವರಮನಿ, ಶಿರಾಳಕೊಪ್ಪದ ಹಳ್ಳೂರುಕೇರಿಯ ಜಿಯಾವುಲ್ಲಾ ಭಾಷಾಸಾಬ್ ಹಾಗೂ ಪೃಥ್ವಿರಾಜ ಸಹದೇವಪ್ಪ ವಡಕನ್ನವರಮನಿ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.