ಮಕ್ಕಳಾಟಕ್ಕೆ ಎರಡು ಜೀವ ಬಲಿ; ಅಸ್ವಸ್ಥಗೊಂಡಿರುವ ಮತ್ತೊಬ್ಬ ಬಾಲಕ ಆಸ್ಪತ್ರೆಯಲ್ಲಿ..

water death
ಸಾಂದರ್ಭಿಕ ಚಿತ್ರ
Published on

ಹುಬ್ಬಳ್ಳಿ: ಮಕ್ಕಳು ಆಟ ಆಡುತ್ತಲೇ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಇದೀಗ ಇನ್ನಿಬ್ಬರು ಮಕ್ಕಳು ಹೀಗೆ ಮಕ್ಕಳಾಟದಿಂದಾಗಿ ಜೀವ ಕಳೆದುಕೊಂಡ ಪ್ರಕರಣ ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.

ಇಲ್ಲಿನ ಮಕ್ಕಳು ಮನೆಯ ಹಿಂದಿರುವ ಮಣ್ಣಿನ ಕ್ವಾರಿಯಲ್ಲಿ ಆಟವಾಡಲು ತೆರಳಿದ್ದರು. ನೀರು ತುಂಬಿದ್ದ ಮಣ್ಣಿನ ಕ್ವಾರಿಯಲ್ಲಿ ಈಜಲು ಹೋದ ಮೂವರು ಬಾಲಕರಲ್ಲಿ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಹರೀಶ್​ ಶಿವಳ್ಳಿ ಗೌಡರ್​ (7) ಮತ್ತು ಗೌತಮ ಶಿವಳ್ಳಿಗೌಡ ಮೃತಪಟ್ಟಿರುವ ಮಕ್ಕಳು.

ಇನ್ನೊಬ್ಬ ಬಾಲಕ ಮಣ್ಣಿನ ಕ್ವಾರಿಯಲ್ಲಿ ತುಂಬಿದ್ದ ನೀರು ಕುಡಿದು ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳನ್ನು ಕ್ವಾರಿಯಿಂದ ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net