ಹಾಲು ಕರೆಯಲು ಕೊಟ್ಟಿಗೆಗೆ ಹೋದ ಬಾಲಕರಿಬ್ಬರ ಮೇಲೆ ಚಿರತೆ ದಾಳಿ: ಇಂದು ಬೆಳ್ಳಂಬೆಳಗ್ಗೆ ಕೊರಟಗೆರೆಯಲ್ಲಿ ಘಟನೆ

cheetha attak
Published on

ಕೊರಟಗೆರೆ: ಕೊಟ್ಟಿಗೆ ಮನೆಯಲ್ಲಿ ಹಸುವಿನ ಹಾಲು ಕರೆಯಲು ಹೋದ ಬಾಲಕರಿಬ್ಬರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಇಂದು(ಶನಿವಾರ) ಬೆಳ್ಳಂ‌ಬೆಳಗ್ಗೆ ಇರಕಸಂದ್ರ ಕಾಲನಿಯಲ್ಲಿ ನಡೆದಿದೆ.

ಧನುಷ್ (13) ಮತ್ತು ಚೇತನ್ (15) ಚಿರತೆ ದಾಳಿಗೆ ಒಳಗಾದವರು. ಕೂದಲೆಳೆ ಅಂತರದಲ್ಲಿ ಚಿರತೆಯಿಂದ ಬಾಲಕರು ಪಾರಾಗಿದ್ದಾರೆ. ಕಾಲು, ತೊಡೆ, ತಲೆ ಹಾಗೂ ಇತರೆ ಭಾಗಗಳಿಗೆ ಸಣ್ಣ ಪುಟ್ಟ ಗಾಯಳಾಗಿವೆ. ಅದೃಷ್ಟವಶಾತ್ ಗಂಭೀರ ಪ್ರಾಣ ಹಾನಿಯಾಗಿಲ್ಲ. ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ‌ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net