ಈಜಲು ಹೋಗಿ ಬಾಲಕರಿಬ್ಬರ ದುರ್ಮರಣ

crime
Published on

ಹುಬ್ಬಳ್ಳಿ: ಕೃಷಿಹೊಂಡದಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು ಮುಳುಗಿ ಮೃತಪಟ್ಟ ಘಟನೆ ಸಮೀಪದ ಗಾಮನಗಟ್ಟಿಯಲ್ಲಿ ಬುಧವಾರ ಸಂಭವಿಸಿದೆ.

ಗಾಮನಗಟ್ಟಿ ಮೇದಾರ ಓಣಿಯ ಜೀವನ ಕುಮಾರ(12), ಪವನ ತಡಸಿನಕೊಪ್ಪ(12) ಮೃತರು.

ಸ್ನೇಹಿತರ ಜತೆ ಸೇರಿ ಈಜಲು ಹೋಗಿದ್ದರು. ಆಗ ಕಾಲು ಜಾರಿ ಬಿದಿದ್ದಾರೆ. ಜತೆಯಲ್ಲಿದ್ದ ಬಾಲಕನೊಬ್ಬ ಸಂಭವಿಸಿದ ಘಟನೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ.

ತಕ್ಷಣ ಸ್ಥಳಕ್ಕೆ ತೆರಳಿದ ಗ್ರಾಮಸ್ಥರು ಬಾಲಕರ ಮೃತ ದೇಹ ಹೊರಗೆ ತೆಗೆದಿದ್ದಾರೆ. ನವನಗರ ಎಪಿಎಂಸಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮೃತದೇಹ ನಗರದ ಕೆಎಂಸಿಆರ್‌ಐಗೆ ರವಾನಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net