ಭಾರಿ ಮಳೆ ಹಿನ್ನೆಲೆ ಗುಡ್ಡದ ಬಂಡೆ ಉರುಳಿ ಬಾಲಕರಿಬ್ಬರ ಸಾವು, ಇನ್ನೋರ್ವನಿಗೆ ಕಾಲು ಮುರಿತ

bOY
Published on

ರಾಯಚೂರು: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಗುಡ್ಡದ ಬಂಡೆಯೊಂದು ಉರುಳಿ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ದೇವದುರ್ಗದ ಗೌರಂಪೇಟೆ ಕಾಲೋನಿ ಬಳಿ ಶುಕ್ರವಾರ ನಡೆದಿದೆ.

ವಿರೇಶ್ (13) ಹಾಗೂ ರಮೇಶ್ (10) ಮೃತ ಬಾಲಕರು. ಇನ್ನೋರ್ವ ಬಾಲಕ ಮೌನೇಶ್‌ಗೆ ಕಾಲು ಮುರಿದ್ದಿದ್ದು, ಚಿಕಿತ್ಸೆಗಾಗಿ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳೆ ನಿಂತ ಬಳಿಕ ಬಾಲಕರು ಗುಡ್ಡದ ಬಳಿ ಆಟವಾಡುತ್ತಿದ್ದರು. ಆದರೆ, ನಿರಂತರ ಮಳೆಯಿಂದ ನೆನೆದಿದ್ದ ಬಂಡೆ ಜಾರಿ ಆಟವಾಡುತ್ತಿದ್ದ ಬಾಲಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net