ಮೀನುಗಾರರ ಎರಡು ದೋಣಿಗಳನ್ನು ಹಿಡಿದಿಟ್ಟ ನೌಕಾ ಸೇನೆಯ ಅಧಿಕಾರಿಗಳು

memorandum
Published on

ಕಾರವಾರ: ಸೀಬರ್ಡ್ ನೌಕಾಲೆಯ ಒಳಗೆ ಆಕಸ್ಮಿಕವಾಗಿ ತೆರಳಿದ ಮುದಗಾದ ಎರಡು ಮೀನುಗಾರಿಕೆ ದೋಣಿಗಳನ್ನು ನೌಕಾಸೇನೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅದನ್ನು ಬಿಡಿಸಿಕೊಡುವಂತೆ ಮೀನುಗಾರರು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೊರೆ ಹೋಗಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾದ ಮೀನುಗಾರರ ಮುಖಂಡರು. ಜೂನ್ 16 ರಂದು ಅರಬ್ಬಿ ಸಮುದ್ರದಲ್ಲಿ ಬಲೆ ಹಾಕಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಶ್ರೀ ಆರ್ಯ ದುರ್ಗಾ ಹಾಗೂ ಆರ್ಯ ಪರಂ ಎಂಬ ದೋಣಿಗಳು ನೌಕಾನೆಲೆಯ ವ್ಯಾಪ್ತಿಯಲ್ಲಿ ತೆರಳಿದ್ದವು. ಅದರಲ್ಲಿ ಮೀನುಗಾರರಿದ್ದರು. 6 ಜನ ಮೀನುಗಾರರಿದ್ದು, ಅವರನ್ನು ಬಿಡಲಾಗಿದೆ. ಆದರೆ, ಎರಡು ದೋಣಿಗಳು ಹಾಗೂ ಬಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಮೀನುಗಾರರಿಗೆ ಬಲೆ ಹಾಗೂ ದೋಣಿ ಸೇರಿ ತಲಾ 3 ಲಕ್ಷಕ್ಕೂ ಅಧಿಕ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಕಸ್ಮಿಕವಾಗಿ ನೌಕಾಸೇನೆಯ ಒಳಗೆ ಹೋಗಿದ್ದಕ್ಕೆ ಕ್ಷಮೆ ಕೇಳಿದ್ದೇವೆ. ನಮಗೆ ಬೇರೆ ಯಾವುದೇ ಉತ್ಪನ್ನವಿಲ್ಲ. ಈಗ ಯಾಂತ್ರೀಕೃತ ಮೀನುಗಾರಿಕೆ ಬಂದ್ ಆಗಿದ್ದರಿಂದ ಈ ಎರಡು ತಿಂಗಳಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಉತ್ಪನ್ನದ ಕಾಲವಾಗಿದೆ. ದೋಣಿ, ಮತ್ತು ಬಲೆ ಹಿಡಿದಿಟ್ಟಿದ್ದರಿಂದ ಸಮಸ್ಯೆಯಾಗಿದೆ ಎಂದು ಮೀನುಗಾರರು ಸಮಸ್ಯೆ ತೋಡಿಕೊಂಡರು. ಮೀನುಗಾರರ ಮುಖಂಡರಾದ ವಿನಾಯಕ ಹರಿಕಂತ್ರ, ಮಂಜುನಾಥ ಮುದ್ಗೇಕರ್, ಮೀನುಗಾರರಾದ ರಾಜು ವಾಮನ ತಾಂಡೇಲ, ಅಭಿಜಿತ್ ಶೆಟ್ಟಿ, ರಾಜು ಓಮು ತಾಂಡೇಲ, ರವಿ ನಾರಾಯಣ ಹರಿಕಂತ್ರ, ಉಮೇಶ ಹರಿಕಂತ್ರ, ರತನ್ ದುರ್ಗೇಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net