

ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುವಾರ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಬೈಕ್ ಸವಾರರು ಅಸು ನೀಗಿದ್ದಾರೆ. ಚಿತ್ರದುರ್ಗ ತಾಲೂ ಕು ಹೊರವಲಯದ ಎನ್‌ಎಚ್ 48ರ ಟ್ರಕ್ ಟರ್ಮಿನಲ್ ಬಳಿ ರಾತ್ರಿ 11ರ ಸಮಯದಲ್ಲಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸಾದರಹಳ್ಳಿಯ ರವಿಕುಮಾರ್(24)ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಬಸ್ ನಿಲ್ದಾಣದ ಬಳಿ ಸಂಜೆ 4.45ರ ಸಮಯದಲ್ಲಿ ಬೈಕ್‌ಗೆ ಲಾರಿ,ಬೈಕ್‌ಗೆ ಡಿಕ್ಕಿ ಹೊಡೆ ದು ಸವಾರ ಚನ್ನಗಿರಿ ತಾಲೂಕು ಚಿರಡೋಣಿಯ ಸುರೇಶ(22)ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದೊಯ್ಯುವ ಮಾರ್ಗದಲ್ಲಿ ಅಸು ನೀಗಿದ್ದಾರೆ.
ಹಿರಿಯೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ದ್ದಾರೆ.
-----