

ಹಿರೇಬಾಗೇವಾಡಿ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಸಂತೋಷ ಬೇವಿನಕೊಪ್ಪ, ಖಾನಾಪುರದ ರಾಜು ಪಾಟೀಲ ಎಂಬ ಆರೋಪಿಗಳನ್ನು ಬಂಧಿಸಿರುವ ಹಿರೇಬಾಗೇವಾಡಿ ಪೊಲೀಸರು 4.10 ಲಕ್ಷ ರೂ. ಮೌಲ್ಯದ 7 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಶ್ರೀನಗರ, ವಡಗಾವಿ, ಮುನವಳ್ಳಿ, ಹುಬ್ಬಳ್ಳಿ ಸೇರಿ ವಿವಿಧೆಡೆಯ ಬೈಕ್ ಕಳವು ಪ್ರಕರಣಗಳಲ್ಲಿ ಈ ಆರೋಪಿಗಳು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.