ಇಬ್ಬರು ಬೈಕ್ ಸವಾರರು ಸಾವು

Accident
Published on

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಗಡಿಹಿಂಗ್ಲಜ್ ರಸ್ತೆ ಕ್ರಾಸ್ ಬಳಿ ಮಂಗಳವಾರ ಬುಲೆರೋ ವಾಹನಕ್ಕೆ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಹಿಟ್ನ ಗ್ರಾಮದ ಬಾಳಪ್ಪ ಭೀಮಪ್ಪ ಬೆಕಣ್ಣವರ (36) ಮತ್ತು ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಮಂಜುನಾಥ ಭೀಮಪ್ಪ ಗುರವ (27) ಮೃತಪಟ್ಟವರು. ಗಡಿಹಿಂಗ್ಲಜ್ ಕಡೆಯಿಂದ ಬಂದ ಬೈಕ್ ಎದುರಿಗೆ ಬರುತ್ತಿದ್ದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net