ಇನ್ನು ಜಿಲ್ಲೆಗೆ ಇಬ್ಬರು ಎಎಸ್‌ಪಿಗಳು

M.Jagadish
Published on

ಕಾರವಾರ: ಜಿಲ್ಲೆಗೆ ಈಗ ಎರಡು ಹೆಚ್ಚುವರಿ ಎಸ್‌ಪಿ ಹುದ್ದೆ ಮಂಜೂರಾಗಿದೆ. ಜಿಲ್ಲೆಯ ಮೊದಲ ಹೆಚ್ಚುವರಿ ಎಸ್‌ಪಿ-2 ಆಗಿ ಎಂ.ಜಗದೀಶ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಜಗದೀಶ ಅವರು ಜಿಲ್ಲೆಯ ಯಲ್ಲಾಪುರ ಮೂಲದವರಾಗಿದ್ದು, ಈ ಹಿಂದೆ ಹೊನ್ನಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಮಡಿಕೇರಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಡ್ತಿ ಹೊಂದಿ ಕಾರವಾರ ಎಎಸ್‌ಪಿಯಾಗಿ ನೇಮಕಗೊಂಡಿದ್ದಾರೆ.
ಜಿಲ್ಲೆಯಲ್ಲಿ ಎಸ್‌ಪಿ ಅವರ ಅಡಿ ಹೆಚ್ಚುವರಿ ಎಸ್‌ಪಿ ಹಾಗೂ ಅವರ ಅಡಿ ಜಿಲ್ಲಾ ಅಪರಾಧ ದಾಖಲೆ ( ವಿಭಾಗದಲ್ಲಿ ಡಿವೈಎಸ್‌ಪಿ ಹುದ್ದೆಗಳಿದ್ದವು. ಅಪರಾಧ ದಾಖಲೆ ವಿಭಾಗದ ಡಿವೈಎಸ್‌ಪಿ ಹುದ್ದೆಯನ್ನು ರದ್ದು ಮಾಡಲಾಗಿದ್ದು, ಮತ್ತೊಂದು ಹೆಚ್ಚುವರಿ ಎಸ್‌ಪಿ ಹುದ್ದೆ ಸೃಷ್ಟಿ ಮಾಡಲಾಗಿದೆ. ಸದ್ಯ ಉತ್ತರ ಕನ್ನಡ ಹೆಚ್ಚುವರಿ ಎಸ್‌ಪಿ-1 ಆಗಿ ಸಿ.ಟಿ.ಜಯಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net