ಕಳ್ಳತನ ಆರೋಪದಡಿ ಇಬ್ಬರ ಬಂಧನ

crime
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ವಾಕರಸಾ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದ ಆವರಣದಲ್ಲಿ 23 ಕೆಜಿ ನಿರುಪಯುಕ್ತ ಅಲ್ಯೂಮಿನಿಯಂ ತುಕಡಿ ಕಳ್ಳತನ ಮಾಡಿದ ಆರೋಪದಡಿ ಇಬ್ಬರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಶಪ್ಪ ಮತ್ತು ಶಂಕರ ವಿರುದ್ಧ ಕೆಎಸ್‌ಆರ್‌ಟಿಸಿಯ ಸಹಾಯಕ ಭದ್ರತಾ ನಿರೀಕ್ಷಕರು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net