ಕಾಸರಗೋಡಿನಲ್ಲಿ ಡ್ರಗ್ಸ್ ಜಾಲದ ಇಬ್ಬರು ಅಂದರ್

DRUGS
Published on

ಕಾಸರಗೋಡು: ಕುಂಬಳೆ ಕುಂಟಂಗೇರಡ್ಕದ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ, ಮೂಲತ: ಮಲಪ್ಪುರಂ ನಿವಾಸಿ ನೌಶಾದ್ ಎಂಬಾತನನ್ನು ಡಿವೈಎಸ್‌ಪಿ ಮನೋಜ್ ನೇತೃತ್ವದ ಪೊಲೀಸರ ತಂಡ ಶನಿವಾರ ಬಂಧಿಸಿದೆ. ಈತನಿಂದ 12 ಗ್ರಾಂ ಎಂಡಿಎಂಎ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮೇಲ್ಪರಂಬ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬ್ರೌನ್‌ಶುಗರ್ ಸಾಗಿಸುತ್ತಿದ್ದ ರಫೀಕ್ ಸಿ.ಎಚ್.ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಶದಲ್ಲಿದ್ದ 0.143ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಗಾಂಜಾ, ಎಂಡಿಎಂಎ, ಬ್ರೌನ್‌ಶುಗರ್ ಮಾರಾಟ ಹಾಗೂ ಸಾಗಾಟ ಪ್ರಕರಣ ಹೆಚ್ಚುತ್ತಿರುವುದನ್ನು ಮನಗಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನೇತೃತ್ವದಲ್ಲಿ ವಿಶೇಷ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net