ಟ್ರ್ಯಾಕ್ಟರ್ ಕಳವು ಮಾಡಿದ್ದ ಇಬ್ಬರ ಬಂಧನ

Arrest Kaidhi
Published on

ಮಳವಳ್ಳಿ: ತಾಲೂಕಿನ ದೊಡ್ಡಬೂವಳ್ಳಿಯಲ್ಲಿ ಕಳವು ಮಾಡಿದ್ದ ಟ್ರ್ಯಾಕ್ಟರ್‌ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಿರಣ್ ಅಲಿಯಾಸ್ ಕಿರಣ್ ರೆಡ್ಡಿ ಹಾಗೂ ರಮೇಶ್ ಬೂದಿಹಾಳ್ ಬಂಧಿತರು.


ಅ.6ರಂದು ದೊಡ್ಡಬೂವಳ್ಳಿ ಗ್ರಾಮದ ಮಠದ ಬಳಿ ನಿಲ್ಲಿಸಿದ್ದ ಬೆಳಕವಾಡಿಯ ಕಿರಣ್ ಅವರ ಟ್ರ್ಯಾಕ್ಟರ್ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಕೊಪ್ಪಳದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕೊಪ್ಪಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಕಳವು ಪ್ರಕರಣದ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊಪ್ಪಳ ಪೊಲೀಸರು ಮಂಗಳವಾರ ಬೆಳಕವಾಡಿ ಪೊಲೀಸರಿಗೆ ಆರೋಪಿಗಳು ಹಾಗೂ ಟ್ರಾೃಕ್ಟರ್‌ಅನ್ನು ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net