ಅಡಕೆ ಕದ್ದಿದ್ದ ಇಬ್ಬರ ಬಂಧನ

Adake kalla
Published on

ಸಿದ್ದಾಪುರ: ತಾಲೂಕಿನ ಇಟಗಿ ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಕೆ ಕಳವು ಮಾಡಿದ ಇಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರಿಂದ 1.20 ಲಕ್ಷ ರೂ.ಮೌಲ್ಯದ 4 ಕ್ವಿಂ.ಅಡಕೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರು, ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಟಗಿಯ ಆಲದಕಟ್ಟೆಯ ಮಹಮ್ಮದ್ ಶಫಿ ಅಬ್ದುಲ್ ಅಜೀಂ ಸಾಬ್ ಎನ್ನುವವರು ಅಡಕೆ ಕಳುವಾದ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸೆಂಟ್ರಿಂಗ್ ಕೆಲಸ ಮಾಡುವ ಬಿಳಗಿ ಸಮೀಪದ ಹೊಸಮಂಜುವಿನ ಅಖ್ತರ್ ರಝಾ ರಫೀಕ್‌ಸಾಬ್(20), ಇಟಗಿ ಆಲದಕಟ್ಟೆಯ ಇಮ್ರಾನ್‌ಶೇಖ್ ಹುಸೇನ್‌ಸಾಬ್ (24)ನನ್ನು ಬಂಧಿಸಿದ್ದಾರೆ.

ಪಿಐ ಕುಮಾರ ಕೆ.,ಪಿಎಸ್‌ಐ ಅನಿಲ ಬಿ.ಎಂ., ಗೀತಾ ಸಿರ್ಸಿಕರ, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net