ಸರಣಿ ಕಳ್ಳತನ ಮಾಡಿದ್ದ ಇಬ್ಬರ ಬಂಧನ

Nyamati, Serial Theft,
Published on

ನ್ಯಾಮತಿ ತಾಲೂಕಿನ 8 ಕಡೆ ಕಳವು I ಬಂಧಿತರಿಂದ ಬೆಳ್ಳಿ- ಬಂಗಾರದ ಆಭರಣ ವಶಕ್ಕೆ

ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನ ಸುರಹೊನ್ನೆ, ಗಂಜೀನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 8 ಕಡೆ ಸರಣಿ ಕಳ್ಳತನ ಮಾಡಿದ್ದ ನಾಲ್ವರಲ್ಲಿ ಇಬ್ಬರನ್ನು ನ್ಯಾಮತಿ ಠಾಣೆ ಪೊಲೀಸ್ ನಿರೀಕ್ಷಕ ಎನ್.ಎಸ್. ರವಿ ನೇತೃತ್ವದ ತಂಡ ಸೆರೆ ಹಿಡಿದಿದೆ.

ಚನ್ನಗಿರಿ ಪೊಲೀಸ್ ಉಪಅಧೀಕ್ಷಕ ರುದ್ರಪ್ಪ ಉಜ್ಜನಕೊಪ್ಪ ಉಸ್ತುವಾರಿಯ ಕಾರ್ಯಾಚರಣೆಯಲ್ಲಿ ನಾಲ್ವರು ಕಳ್ಳರ ತಂಡದಲ್ಲಿ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ರಾಮ, ಮಾವಿನಕಟ್ಟೆ ಗ್ರಾಮದ ಟಿ. ಸಂತೋಷರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರಿಂದ ಅಂದಾಜು 6.20ಲಕ್ಷ ಮೌಲ್ಯದ 80 ಗ್ರಾಂ ಚಿನ್ನ, 810 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡ ಆರೋಪಿಗಳಾದ ಧನಂಜಯ ಮತ್ತು ಮುಖೇಶ ಪತ್ತೆ ಕಾರ್ಯಚರಣೆ ಮುಂದುವರಿದಿದೆ.

ಪಿಎಸ್‌ಐ ಬಿ.ಎಲ್. ಜಯಪ್ಪ ನಾಯ್ಕ, ಸಿಬ್ಬಂದಿ ಎಚ್.ಸಿ. ಉಮೇಶ್, ಕೆ. ಮಂಜಪ್ಪ, ಎಚ್.ಸಿ. ಚನ್ನೇಶ್, ಮಹೇಶ ನಾಯ್ಕ, ಪ್ರವೀಣ್ ಕುಮಾರ್, ಡಿ.ಎಸ್. ದೇವರಾಜ್, ಪ್ರಶಾಂತ್ ಕಾರ್ಯಚರಣೆ ನಡೆಸಿದ ತಂಡದಲ್ಲಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಮಂಜುನಾಥ ಮತ್ತು ಚನ್ನಗಿರಿ ಪೊಲೀಸ್ ಉಪಅಧೀಕ್ಷಕರಾದ ರುದ್ರಪ್ಪ ಉಜ್ಜನಕೊಪ್ಪ ತಂಡದ ಕಾರ್ಯ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net