ಗಾಂಜಾ ಮಾರುತ್ತಿದ್ದ ಇಬ್ಬರ ವಶ

27 05 2025_BNG_RURAL_PAGE_2
ಹೊಸೂರು ನಗರ ಸಮೀಪದ ಕಪ್ಪಕ್ಕಲ್​ ಪ್ರದೇಶದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಮತ್ತಿಗಿರಿ ಪೊಲೀಸರು ಬಂಧಿಸಿ, 2 ಕೆಜಿ ಗಾಂಜಾ ವಶಕ್ಕೆ ಪಡೆದರು. ಇನ್​ಸ್ಪೆಕ್ಟರ್​ ಮಂಜುಳಾ ಹಾಗೂ ಸಿಬ್ಬಂದಿ ಇದ್ದರು.
Published on

ಹೊಸೂರು : ನಗರ ಸಮೀಪದ ಕಪ್ಪಕ್ಕಲ್​ ಪ್ರದೇಶದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಮತ್ತಿಗಿರಿ ಪೊಲೀಸರು ಬಂಧಿಸಿದ್ದು, 2 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಒಡಿಸ್ಸಾ ಮೂಲದ ರವೀಂದ್ರನಾಥ ಸಾಹು(25) ಮತ್ತು ಶ್ರವಣಕುಮಾರ್​ (29) ಬಂಧಿತರು. ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ರವೀಂದ್ರನಾಥ್​ ಹಾಗೂ ಶ್ರವಣಕುಮಾರ್​, ಅತಿಪಲ್ಲಿಯಿಂದ ಗಾಂಜಾ ಖರೀದಿಸಿ ಕಪ್ಪಕ್ಕಲ್​ ಹಾಗೂ ಮತ್ತಿಗಿರಿ ಪ್ರದೇಶದಲ್ಲಿ ಮಾರಾಟಮಾಡುತ್ತಿದ್ದರು ಎನ್ನಲಾಗಿದ್ದು, ಸೋಮವಾರ ಮತ್ತಿಗಿರಿ ಬಳಿಯ ಕಪ್ಪಕ್ಕಲ್​ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಇಬ್ಬರನ್ನು ಇನ್​ಸ್ಪೆಕ್ಟರ್​ ಮಂಜುಳಾ ನೇತೃತ್ವದ ತಂಡ ಬಂಧಿಸಿ, ವಿಚಾರಣೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಳಾಸ ಕೇಳುವ ನೆಪದಲ್ಲಿ ಚಿನ್ನಾಭರಣ ದರೋಡೆ

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ನಂದರಾಮಯ್ಯನಪಾಳ್ಯದ ಅನ್ನಪೂರ್ಣ ಬಡಾವಣೆಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮುಖಕ್ಕೆ ಸೆ ಸಿಂಪಡಿಸಿ, ಪ್ರೆ ತಪ್ಪಿಸಿದ ಅಪರಿಚಿತರು ಚಿನ್ನದ ಸರ ಹಾಗೂ ಓಲೆ ದೋಚಿ ಪರಾರಿಯಾಗಿದ್ದಾರೆ.

ಬಡಾವಣೆ ನಿವಾಸಿ ಲಕ್ಷಿ$್ಮ ಅವರ ಮನೆ ಬಳಿ ಬಂದ ಇಬ್ಬರು ಅಪರಿಚಿತರ ಪೈಕಿ ಒಬ್ಬ ವಿಳಾಸ ಕೇಳುವ ನೆಪದಲ್ಲಿ ಲಕ್ಷಿ$್ಮ ಅವರನ್ನು ಮಾತನಾಡಿಸಿದ್ದು, ಇದೇ ವೇಳೆ ಇನ್ನೊಬ್ಬ ಲಕ್ಷಿ$್ಮ ಅವರ ಮುಖಕ್ಕೆ ರಾಸಾಯನಿಕ ಸೆ ಮಾಡಿ, ಪ್ರೆ ತಪ್ಪಿಸಿದ್ದಾನೆ. ಬಳಿಕ ಲಕ್ಷಿ$್ಮ ಅವರ ಮಾಂಗಲ್ಯಸರ ಹಾಗೂ ಓಲೆ ಕದ್ದು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ಲಕ್ಷಿ$್ಮ, ಕಳ್ಳರು ಚಿನ್ನಾಭರಣ ದೋಚಿರುವುದು ಗೊತ್ತಾಗಿ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net