ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

arrest
Published on

ದಾಂಡೇಲಿ: ನಗರದ ಐಪಿಎಂ ಗೇಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸೋಲಾಪುರ ನಿವಾಸಿ ವಸೀಂ ಇಸಾಕ ಮುಜಾವರ(27) ಮತ್ತು ನಗರದ ಸುಭಾಸನಗರದ ನಿವಾಸಿ ಶಾನವಾಜ ಇಮ್ತಿಯಾಜ ಶೇಖ(22) ಬಂಧಿತ ಆರೋಪಿಗಳು. ಬಂಧಿತರಿಂದ 1.198 ಕೆಜಿ ಹಾಗೂ 550 ರೂ. ವಶಪಡಿಸಿಕೊಳ್ಳಲಾಗಿದೆ. ಗಾಂಜಾದ ಒಟ್ಟು ಮೌಲ್ಯ 60,000ರೂ. ಎಂದು ಪೋಲಿಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪಿಎಸ್‌ಐ ಅಮೀನಸಾಬ ಅತ್ತಾರ, ಕಿರಣ ಪಾಟೀಲ, ಸಿಬ್ಬಂದಿಗಳಾದ ಇಮ್ರಾನ ಕಂಬಾರಗಣವಿ, ಕೃಷ್ಣ ಬೆಳ್ಳುವರಿ, ಮೆಹಬೂಬ ಕಿಲ್ಲೇದಾರ, ಶಾಸಪ್ಪ, ಬಸವರಾಜ ತೇಲಸಂಗ, ಪ್ರಸನ್ನಕುಮಾರ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net