ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

new Ganja New
Published on

ಹುಬ್ಬಳ್ಳಿ: ಇಲ್ಲಿನ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್​ಶೆಡ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳವಾರ ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ 20 ಸಾವಿರ ರೂ. ಮೌಲ್ಯದ 200 ಗ್ರಾಂ ಗಾಂಜಾ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾರ್ ವಾಶಿಂಗ್ ಕೆಲಸ ಮಾಡುವ ಕೇಶ್ವಾಪುರ ನಿವಾಸಿಗಳಾದ ಸಾಕೀಬ ಮಾಬೂಸಾಬ ಕೊಪ್ಪಳ (21) ಹಾಗೂ ಭರತ ವಿರುಪಾಕ್ಷಿ ಭಟ್ಟೂರ (21) ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net