ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

29 Dwd 3 Sadik and Nazim
Published on

ಧಾರವಾಡ: ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಹರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಲ್ಲಿನ ಜನ್ನತನಗರದ ಸಾದಿಕ್ ಇಮಾಮಹುಸೇನ್ ಕಬಾಡಿ ಹಾಗೂ ಹಾಶ್ಮಿನಗರದ ನಾಜೀಂ ದದ್ದುಸಾಬ ಶೇಖ್ ಬಂಧಿತರು. ಇವರಿಬ್ಬರೂ ಇಲ್ಲಿ ಸಿಎಸ್‌ಐ ಕಾಲೇಜ್ ಹತ್ತಿರ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಹರ ಠಾಣೆ ಪಿಎಸ್‌ಐಗಳಾದ ಚಂದ್ರಶೇಖರ ಮದರಖಂಡಿ ಹಾಗೂ ಅಶೋಕ ಬಿ.ಎಸ್. ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದೆ.
ಆರೋಪಿಗಳಿ0ದ 377 ಗ್ರಾಂ ಗಾಂಜಾ, 2,200 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net