ಮಂಗಳೂರು ವೇಶ್ಯಾವಾಟಿಕೆ ಇಬ್ಬರ ಬಂಧನ

arrested
Published on

ಮಂಗಳೂರು: ಕಣ್ಣೂರಿನ ದಯಾಂಬು ಬಳಿಯ ಅಪಾರ್ಚ್ ಮೆಂಟ್ ಒಂದರಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕಂಕನಾಡಿ ನಗರ ಠಾಣೆ ಪೊಲೀಸರು ಓರ್ವ ಮಹಿಳೆ ಮತ್ತು ಪುರುಷನನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಪಡು ನಿವಾಸಿ ಹಸೀನಾ (30) ಮತ್ತು ಪಾವೂರು ಬದ್ರಿಯಾ ನಗರ ಅಬ್ದುಲ್ ಲತೀಫ್ (38) ಬಂಧಿತ ಆರೋಪಿಗಳು. ಉತ್ತರ ಪ್ರದೇಶ ಮೂಲದ ಸಂತ್ರಸ್ತ ಯುವತಿಯನ್ನು ರಕ್ಷಿಸಲಾಗಿದೆ.

ಹೊರ ರಾಜ್ಯಗಳಿಂದ ಹುಡುಗಿಯರನ್ನು ಕರೆ ತಂದು ಪುರುಷ ಗಿರಾಕಿಗಳಿಂದ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ದಕ್ಷಿಣ ವಲಯ ಎಸಿಪಿ ವಿಜಯ ಕ್ರಾಂತಿ ಅವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸೋಮವಾರ ಸಂಜೆ 5.15ರ ವೇಳೆಗೆ ದಾಳಿ ನಡೆಸಲಾಗಿದೆ. ಈ ವೇಳೆ ಫ್ಲ್ಯಾಟ್‌ನ ಮೂರನೇ ಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ಸ್ಥಳದಿಂದ ಕಾಂಡಮ್‌ಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net