ಚಿನ್ನದ ಸರ, ಮೊಬೈಲ್ ಸುಲಿಗೆಗೈದ ಇಬ್ಬರ ಬಂಧನ

Crime
Published on

ಮಂಗಳೂರು: ಬೈಕಂಪಾಡಿ ರೈಲ್ವೆ ಟ್ರಾಕ್ ಬಳಿ ಚಿನ್ನದ ಸರ ಮತ್ತು ಮೊಬೈಲ್ ಫೋನ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗ್ರೆ ನಿವಾಸಿಗಳಾದ ನಿಹಾಲ್ ವೈ.ಸುವರ್ಣ(19) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಪ್ರಕರಣದ ಆರೋಪಿಗಳು.
ದೂರುದಾರರ ಮಗನನ್ನು ಜೂ.16ರಂದು ಆರೋಪಿಗಳು ಬೈಕಂಪಾಡಿ ಹತ್ತಿರದ ರೈಲ್ವೆ ಟ್ರಾಕ್ ಬಳಿಗೆ ಫೋನ್ ಮಾಡಿ ಕರೆಸಿಕೊಂಡು ಬಳಿಕ ಕಣ್ಣಿಗೆ ಮೆಣಸಿನ ಹುಡಿ ಎರಚಿ ಅವನ ಮೊಬೈಲ್ ಮತ್ತು ಚಿನ್ನದ ಸರವನ್ನು ಸುಲಿಗೆ ನಡೆಸಿದ್ದಾರೆ. ಸಂತ್ರಸ್ತ ಬಾಲಕ ಹಾಗೂ ಆರೋಪಿ ನಿಹಾಲ್ ಪರಿಚಯದವರೇ ಆಗಿದ್ದಾರೆ. ವಿಷಯ ತಿಳಿದ ಪಣಂಬೂರು ಪೊಲೀಸರು ಕೇವಲ 6 ಗಂಟೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 25 ಸಾವಿರ ರೂ. ಮೌಲ್ಯದ 5.95 ಗ್ರಾಂ ತೂಕದ ಚಿನ್ನದ ಸರ, 10 ಸಾವಿರ ರೂ. ಮೌಲ್ಯದ ಮೊಬೈಲ್ ಸೇರಿದಂತೆ ಒಟ್ಟು 45 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net