ಗಾಂಜಾ ಸೇವಿಸಿದ್ದ ಇಬ್ಬರ ಬಂಧನ

Arrest Kaidhi
Published on

ಬೆಳಗಾವಿ: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಗಾಂಜಾ ಸೇವಿಸಿದ್ದ ಪ್ರಕರಣದಲ್ಲಿ ಇಬ್ಬರನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮಾರ್ಕೆಟ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹಳೇ ತರಕಾರಿ ಮಾರುಕಟ್ಟೆ ಹತ್ತಿರ ಗೋವಾ ಮೂಲದ ಅದಮರೋಹಿಲ್​ ಮಹಮ್ಮದ್​ ರಫೀಕ್​ ಶೇಖ (31) ಮತ್ತು ಕ್ಯಾಂಪ್​ ಪೊಲೀಸ್​ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣದ ಹತ್ತಿರ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ನಿವಾಸಿ ಶಂಕರ ರಾಮಪ್ಪ ದಾಸರ(52) ಎಂಬುವವರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net